ಎಲ್ಲ ರಸ್ತೆಗಳೂ ನಗರಗಳತ್ತ ಮುಖ ಮಾಡಿವೆ. ಸಮವಸ್ತ್ರ ತೊಟ್ಟ ಮಕ್ಕಳನ್ನು ಹೊತ್ತ ವಾಹನಗಳು ಮಣ್ಣು ರಸ್ತೆಯಿಂದ ಜಲ್ಲಿ ರಸ್ತೆಗೆ ನಂತರ ಟಾರು ರಸ್ತೆಗೆ ತಲುಪಿ ಕಾನ್ವೆಂಟ್ ಗಳತ್ತ ಹೋಗುತ್ತಿವೆ. ಟಿಫನ್ ಕ್ಯಾರಿಯರ್ ತುಂಬಿಕೊಂಡ ಬ್ಯಾಗ್ ಹೊತ್ತ ಜನ ಕೆಲಸಕ್ಕೆ ನಗರಕ್ಕೆ ಹೋಗುವ ಬಸ್ ಹತ್ತುತ್ತಿದ್ದಾರೆ. ನಗರವನ್ನು ಸಂಪರ್ಕಿಸುವ ರಸ್ತೆ ಹಳ್ಳಿಗಳತ್ತಲೂ ಹೋಗುತ್ತದೆ ಎನ್ನುತ್ತಾರೆ. ಇದು ಹಾಗಲ್ಲ. ಬೆಟ್ಟದಲ್ಲಿ ಹುಟ್ಟಿದ ನದಿ ಸಮುದ್ರದ ಕಡೆ ಹೋಗುವ ಹಾಗೆ ಅನ್ನಿಸುತ್ತಿಲ್ಲವೇ ? ಮೊಳಕೆಯೊಡೆದ ಚಿಗುರು ಬೆಳಕಿನೆಡೆ ಮುಖ ಎತ್ತಿ ಮೇಲು ಮೇಲಕ್ಕೆ ಬೆಳೆಯುತ್ತ ಗಗನದೆಡೆ ಕತ್ತು ಚಾಚಿದ ಹಾಗೆಯೇ ? ಅಂಥ ಚಿಗುರಿಗೆ ಬೇರಿನ ಮೂಲಕ ನೆಲದ ನಂಟು ಬೇಕೇ ಬೇಕು. ಆದರೆ ನಗರಕ್ಕೆ ಹೊರಟ ಮನುಷ್ಯನಿಗೆ............... ಒಂದೆಡೆ ಈ ವಲಸೆಯನ್ನು ತಡೆದು ಭುವಿಯ, ಬದುಕಿನ ಸ್ವಾಸ್ಥ್ಯವನ್ನು ಕಾಪಾಡಬಹುದಾದ ವ್ಯವಸ್ಥೆಗೆ ಅದರಲ್ಲಿ ಆಸಕ್ತಿ, ಪುರುಸೊತ್ತಿಲ್ಲ. ಇನ್ನು ಇದರಿಂದ ಲಾಭ ಪಡೆಯುವ ಹಿತಾಸಕ್ತಿಗಳು ತಮ್ಮೆಲ್ಲ ಶ್ರಮ ವಹಿಸಿ ದುಡಿಯುತ್ತಿವೆ. ಅಥವಾ ಅಂಥ ಹಿತಾಸಕ್ತಿಗಳ ಕೈಯಲ್ಲೇ ವ್ಯವಸ್ಥೆ ಇದೆಯೇ ?......
Saturday, 25 January 2014
Thursday, 23 January 2014
ಭೀಮೇಶ್ವರ (ಸಕಲೇಶಪುರ)
ಇಲ್ಲಿ ಹರಿಯುತ್ತಿರುವುದು ಎತ್ತಿನ ಹಳ್ಳ. ಮುಂದೆ ಇದೇ ಕೆಂಪು ಹೊಳೆ, ನಂತರ ನೇತ್ರಾವತಿ. ಮೇಲೆ ಹೋಗುತ್ತಿದೆ ನೋಡಿ ಗೂಡ್ಸ್ ರೈಲು, ಅದು ಇಲ್ಲಿಂದ ಮುಂದೆ ಸಾಗಿ ದೋಣಿಗಲ್ಲು, ಮಾರನಹಳ್ಳಿ, ಎಡಕುಮರಿ ಮುಖಾಂತರ ಸುಬ್ರಹ್ಮಣ್ಯ ತಲುಪುತ್ತದೆ. ಈ ರೈಲು ದಾರಿಯಲ್ಲಿ ೫೦-೫೫ ಸುರಂಗಗಳು ಅಷ್ಟೇ ಸೇತುವೆಗಳು ಸಿಗುತ್ತವೆ. ಅತಿ ಹೆಚ್ಚು ಅಂದರೆ ಒಂಬೈನೂರು ಮೀಟರ್ ಉದ್ದದ ಸುರಂಗವೊಂದಿದೆ. ಮಧ್ಯ ಸುರಂಗದಲ್ಲಿ ಇದ್ದರೆ ಹಿಂದೆಯೂ, ಮುಂದೆಯೂ ಬೆಳಕು ಗೋಚರಿಸುವುದೇ ಇಲ್ಲ. ನೂರಕ್ಕೆ ನೂರು ಕತ್ತಲಾಗಿರುತ್ತದೆ. ಕಣ್ಣುಗಳು ವ್ಯರ್ಥ ಎನ್ನಿಸುವಂತಹ ಅನುಭವ.
ಇಲ್ಲ ಬಿಡಿ, ನೀವು ಇಲ್ಲಿ ನನ್ನ ಹಾಗೆ ಭೀಮೇಶ್ವರನ ಸನ್ನಿಧಿಯಲ್ಲಿ (ಭೀಮ ಪೂಜಿಸಿದ್ದರಿಂದ ಶಿವನಿಗೆ ಆ ಹೆಸರು) ನಿಂತು ಈ ದೃಶ್ಯವನ್ನು ನೋಡುವಂತಿಲ್ಲ. ಯಾಕೆ ?
" ಯಾಕೆಂದರೆ, ಇದು ನಮ್ಮ ಸ್ವಂತ ಪ್ರೈವೇಟ್ ಜಾಗ. ನಮಗೆ ಯಾಕೆ ರಿಸ್ಕು ಸುಮ್ಮನೆ. ನಾವು ಗೌರ್‍ಮೆಂಟಿಂದ ಯಾವುದೇ ಸಹಾಯ ತಗೊಂಡಿಲ್ಲ.'' ಎನ್ನುತ್ತಾರೆ ಆ ಎಸ್ಟೇಟಿನ ಒಡೆಯ ವಿಜಿ. ಪಾಪ ಅವರು ಸಕಲೇಶಪುರದ ನಿರಂಜನ ಅವರ ಕೋರಿಕೆಯ ಮೇರೆಗೆ ನಮಗೆ ಅಲ್ಲಿಗೆ ಹೋಗಲು ಅನುವು ಮಾಡಿಕೊಟ್ಟರು.
ಏನಪ್ಪಾ ಹಳ್ಳದ ತೀರದಲ್ಲಿರುವ ದೇವರನ್ನು ನೋಡುವುದಕ್ಕೂ ಇವರದೇನಪ್ಪಾ ತಕರಾರು ಎಂದು ನೀವಂದುಕೊಳ್ಳಬಹುದು ಇಲ್ಲ ಇವರು ಮೊದಲಿಂದ ಹೀಗೆ ರಫ್ ಆಗಿದ್ದವರಲ್ಲ. ಜನ ಸಹಜವಾಗಿ ಬಂದು ನೀರಲ್ಲಿ ಕೈಕಾಲು ತೊಳೆದೋ, ಸ್ನಾನ ಮಾಡಿಯೋ ದೇವರ ದರ್ಶನ ಮಾಡಿ ಹೋಗುತ್ತಿದ್ದರು. ಬರ ಬರುತ್ತಾ ಪ್ರವಾಸೋದ್ಯಮ, ನಾಗರೀಕತೆ ಬೆಳೆದಂತೆ (ಇದು ವಿಪರ್‍ಯಾಸ) ಬೇರೆಯದೇ ತರದ ಜನ ಬರತೊಡಗಿದರು. ಆಗ ಇವರಿಗೆ ಸ್ವಲ್ಪ ಕಿರಿಕಿರಿಯಾದರೂ ಸಹಿಸಿಕೊಂಡು ಬರತೊಡಗಿದರು. ಯಾಕೆಂದರೆ ಪ್ರಕೃತಿ ಸಹಜವಾದ ಸೌಂದರ್ಯವನ್ನು, ದೇವರನ್ನು ನೋಡಲು ತಡೆಯುವುದು ಸರಿಯಲ್ಲ ಎಂದು.
ಆಮೇಲಾಮೇಲೆ ಎಲ್ಲ ಅತಿಯಾಗತೊಡಗಿತು. " ಡ್ರಿಂಕ್ಸ್ ತಗೊಳ್ಳೋದು, ನಾನ್, ವೆಜ್ ಮತ್ತೆ ಹುಡ್ಗೀರು, ಡ್ಯಾನ್ಸು. ಇಲ್ಲೆಲ್ಲ ಎಷ್ಟು ಗಲೀಜು ಮಾಡ್ತಾರೆ ಅಂದ್ರೆ ನಮಗೆ ಅದನ್ನು ಕ್ಲೀನ್ ಮಾಡ್ಲಿಕ್ಕೆ ಒಂದು ದಿನ ಸಾಕಾಗುವುದಿಲ್ಲ. ಮತ್ತೆ ನಮ್ಮ ಕೆಲಸದವರೂ ಅಷ್ಟೇ ಬೇರೆಯವರು ತಿಂದ ಗಲೀಜನ್ನೆಲ್ಲಾ ಕ್ಲೀನು ಮಾಡ್ಲಿಕ್ಕೆ ಒಪ್ಪಲ್ಲ. ಎಂತೆಂಥದೋ ರಿಸ್ಕು" ಇವರು ಕಾನೂನಿನ ತೊಡಕಿನಲ್ಲಿ ಸಿಲುಕಿಕೊಂಡದ್ದೂ ಉಂಟಂತೆ ಪಾಪ.
"ಇದರ ಸಾವಾಸವೇ ಬೇಡ ಅಂತೇಳಿ ಕಾಂಪೌಂಡ್ ಮಾಡ್ಸಿ ಗೇಟಿಗೆ ಬೀಗ ಹಾಕಿದ್ದೇವೆ." ಅಂದು ನಿರಾಳರಾದರು. ಅಲ್ಲಿ ಆಗಾಗ ಸಾಂಪ್ರದಾಯಿಕ ಭಕ್ತರ ಮದುವೆಂತಹ ಸಮಾರಂಭಗಳು ಸರಳವಾಗಿ ಈಗಲೂ ನಡೆಯುತ್ತವೆ. ದೇವಸ್ಥಾನಕ್ಕೆ ಗರ್ಭ ಗುಡಿಯಿಲ್ಲ. ಮೇಲ್ಚಾವಣಿಯ ದೇವಸ್ಥಾನ. ಗೋಡೆಗಳಿಲ್ಲ. ತುಂಬ ಪ್ರಶಾಂತವಾದ ವಾತಾವರಣ. ಸುತ್ತ ಕಾಫಿ ತೋಟ.
ನಾನು ತಿರುಪತಿಗೆ ಹೋಗಿದ್ದಾಗಲೂ ಹುಂಡಿಗೆ ಕಾಣಿಕೆ ಹಾಕಿದವನಲ್ಲ. ತಿಮ್ಮಪ್ಪನಂಥ ದೇವರಿಗೆ ನಾನು ಕೊಡಲು ಶಕ್ತನೇ. ನನ್ನ ಸಾಲವನ್ನು ಮನಸ್ಸು ಮಾಡಿದರೆ ತಿಮ್ಮಪ್ಪ ತೀರಿಸಬಹುದೇ ಹೊರತು, ತಿಮ್ಮಪ್ಪನ ಸಾಲವನ್ನು ತೀರಿಸಲು ನಾನು ಸಹಾಯ ಮಾಡುತ್ತೇನೆನ್ನುವುದು ಅಹಂಕಾರವಾದೀತು. ಆದರೆ ಇಲ್ಲಿನ ವಾತಾವರಣ ನೋಡಿ ಮನಸ್ಸು ಪ್ರಫುಲ್ಲವಾಯಿತು. ತಣ್ಣಗೆ ಕೂತು ಧ್ಯಾನ ಮಾಡಲು ಹೇಳಿ ಮಾಡಿಸಿದ ವಾತಾವರಣ. ನೀರು ಹರಿಯುವ ಶಬ್ದ. ತೋಟದಲ್ಲಿ ಹಕ್ಕಿಗಳ ಚಿಲಿಪಿಲಿ -ಅರ್ಥವಾಗದ ಆದರೆ ಅನಿರ್ವಚನೀಯ ಅನುಭವ ನೀಡುವ - ಮಾತುಕತೆ. ಹುಂಡಿಯಲ್ಲಿ ಒಂದು ನೋಟು ತುರುಕಿ, ನಮಸ್ಕರಿಸಿದೆ. ದೇವರಿಗಲ್ಲ ಅಲ್ಲಿನ ಪರಿಸರಕ್ಕೆ.
ವಾಪಾಸು ಮೇಲೆ ಹತ್ತಿ ಬರುವಾಗ ನಮಗೆ ಬಾಯಾರಿಕೆ ಆಗುತ್ತಿತ್ತು. ಆದರೆ ಅವರು ಸ್ಮೂತ್ ಆಗಿದ್ದರು. " ನೋಡಿ ಇವರೇ, ನಿಮ್ಮಂತವರು ಬಂದರೆ ಪರವಾಗಿಲ್ಲ. ಒಮ್ಮೆ ನೋಡಿ ಐದಾರು ಜನ ಬಂದ್ರು. ಹೀಗೆ ಯಾರೋ ಪರಿಚಯದ ರೆಸಾರ್ಟ್‌ನವರು ಕಳುಹಿಸಿದ್ದರು. ಒಂದರ್ಧ ಗಂಟೆ ಇದ್ದು ಹೋಗ್ತೇವೆ ಅಂದ್ರು. ಮಧ್ಯಾಹ್ನ ಹನ್ನೆರಡಕ್ಕೆ ಬಂದವರು ಸಂಜೆ ಐದಾದರೂ ಹೊರಡುವ ಸೂಚನೆಯೇ ಇಲ್ಲ. ಹೋಗಿ ಕೇಳಿದ್ರೆ " ರೀ ನಾವು ಹಣ ಕೊಟ್ಟು ಬುಕ್ ಮಾಡಿ ಬಂದಿದ್ದೇವೆ. ನೀವ್ಯಾರ್‍ರೀ ಕೇಳೊಕೆ ಅಂತ ನಮಗೇ ದಬಾಯಿಸಿದ್ರು." ...... ಅವರವರ ಕಷ್ಟ ಅವರವರಿಗೆ. ನಾವು ಯಾರದೋ ಜಾಗದಲ್ಲಿದ್ದೇವೆ ಅಂದುಕೊಂಡು ಮನಸೋಇಚ್ಛೆ ವರ್ತಿಸಬಾರದೆನ್ನುವ ಪ್ರಜ್ಞೆ ನಮಗೂ ಇರಬೇಕು. ನಾವು ನೋಟಕ್ಕೆ ಮಾತ್ರ ನಾಗರೀಕರು. ನಡವಳಿಕೆಯಲ್ಲೂ ಅದನ್ನು ಅನುಸರಿಸಬೇಕಲ್ಲವೇ ? ಅವರಿಗೆ ವಂದನೆಗಳನ್ನು ಹೇಳಿ ಹೊರಟೆವು.
Tuesday, 31 December 2013
ಹೊಸದು ?
ನಾಳೆಯಿಂದ ಹೊಸ ವರುಷ
ನಾನದೇ ಹಳೆಯ ಮನುಷ್ಯ
ನಾಳೆಯ ಕ್ಯಾಲೆಂಡರ್ ಹೊಸದು
ಊಹ್ಞೂ, ನಾನಲ್ಲ ; ಬದಲಾಗುವುದಿಲ್ಲ.
ನನ್ನ ಆ ಹಳೆಯ ಚಾಳಿ ಕದಲದು
ಇದು ವರುಷದ ಕೊನೆಯ ದಿನ
ಇಲ್ಲ, ನನ್ನ ಅಟ್ಟಹಾಸಕ್ಕೆ ಕೊನೆ ಮೊದಲಿಲ್ಲ
ಕಾಲಕ್ಕೆ ಪ್ರತಿ ಕ್ಷಣ ಹೊಸದು
ನಾಳೆ ಬರೀ ಕ್ಯಾಲೆಂಡರ್ ಗೆ !
ನಾನದೇ ಹಳೆಯ ಮನುಷ್ಯ
ನಾಳೆಯ ಕ್ಯಾಲೆಂಡರ್ ಹೊಸದು
ಊಹ್ಞೂ, ನಾನಲ್ಲ ; ಬದಲಾಗುವುದಿಲ್ಲ.
ನನ್ನ ಆ ಹಳೆಯ ಚಾಳಿ ಕದಲದು
ಇದು ವರುಷದ ಕೊನೆಯ ದಿನ
ಇಲ್ಲ, ನನ್ನ ಅಟ್ಟಹಾಸಕ್ಕೆ ಕೊನೆ ಮೊದಲಿಲ್ಲ
ಕಾಲಕ್ಕೆ ಪ್ರತಿ ಕ್ಷಣ ಹೊಸದು
ನಾಳೆ ಬರೀ ಕ್ಯಾಲೆಂಡರ್ ಗೆ !
Monday, 16 December 2013
ಅಮ್ಮ 'ಹೋಗಿ' ಎಂಟು ತಿಂಗಳು....
ಅಮ್ಮಾ
ಹೀಗೇಕೆ 'ಹೋದೆ' ಹೇಳದೇ ಕೇಳದೇ
ಹೋಗುವ ಹೊತ್ತೇ ಅಲ್ಲವಲ್ಲ !
ನೀನು ಮಾಡಬೇಕಾದ್ದು
ಮಾಡಿಸಬೇಕಾದ್ದು ; ನೋಡಬೇಕಾದ್ದು
ಬಹಳಷ್ಟು ಉಳಿದಿದೆ.
ನಿನ್ನ ಪ್ರತಿಕ್ರಿಯೆಗೆ ಕಾದಿದೆ
ಹೆದರುವ ಖುಷಿಯೇ ಇಲ್ಲ ನೀನಿಲ್ಲದೇ.
ನನಗೆ ಗೊತ್ತು
ನಿನಗೆ ಇಲ್ಲಿ ಎಲ್ಲ
ಸರಿ ಇದೆ ಎನಿಸುತ್ತಿರಲಿಲ್ಲ :
ಅವರು ಇವರ ಮನೆಗೆ ಹೋಗಲ್ಲ
ಇವರು ಅವರ ಮಾತಾಡಿಸಲ್ಲ
ಯಾರೋ ಯಾರನ್ನೋ ಕರೆದು ಕಳಿಸಲಿಲ್ಲ
ಆತ ಹೆಂಡತಿಯ ಮಾತು ಮೀರಲ್ಲ
ಈಕೆ ಗಂಡನ ಮಾತು ಕೇಳಲ್ಲ
ಇನ್ನಾರೋ ಅಪ್ಪ-ಅಮ್ಮನ್ನ ನೋಡಲ್ಲ.....
......... ಹೀಗೆ ನಿನಗೆ ಅನಿಸುತ್ತಿತ್ತಲ್ಲ......
ಅದೆಲ್ಲ ಹಾಗೇ ಇದೆಯಲ್ಲ !......
ಆದರೂ ನೀ ಹೀಗೆ 'ಬಾರದ ಊರಿಗೆ' ಹೋಗಬಾರದಿತ್ತು......

Saturday, 14 December 2013
ಕನಸು ಮುರುಟದಿರಲಿ
ಅರವಿಂದ ಕೇಜ್ರೀವಾಲ್ ಗೆ ಆದರ್ಶದ ಕ್ರೇಜ್ ಇರುವಂತಿದೆ. ಇರಲಿ, ಆದರ್ಶದ ಬಗೆಗಿನ ಅವರ ಅತೀವ ಕಾಳಜಿಯೇ ಅವರನ್ನು ಹೋರಾಟದ ಹಾದಿಯಿಂದ ಅಧಿಕಾರದ ಹೆಬ್ಬಾಗಿಲವರೆಗೆ ತಂದು ನಿಲ್ಲಿಸಿದೆ. ಅದಕ್ಕಾಗಿ ಅವರು ಸಾಕಷ್ಟು ಬೆವರು ಹರಿಸಿದ್ದಾರೆ. ಅಣ್ಣಾ ಹಜಾರೆ ಜೊತೆಗೂಡಿ ವ್ಯವಸ್ಥೆಯನ್ನು ಶುದ್ಧೀಕರಿಸಲು ಹೋರಾಟ ಆರಂಭಿಸಿದ ಕೇಜ್ರೀವಾಲ್ ''ಅಲ್ಲಿ ಹಾರಾಡುವುದಲ್ಲ ; ಇಲ್ಲಿ ಬಂದು ಹೋರಾಡಿ ಗೆಲ್ಲಿ ನೋಡೋಣ '' ಎಂಬ ಸೋಕಾಲ್ಡ್ ರಾಜಕಾರಣಿಗಳ ಆಹ್ವಾನವನ್ನು ಸ್ವೀಕರಿಸಿ ಈ ಹಂತಕ್ಕೆ ಬಂದಿದ್ದಾರೆ. ಅಭಿನಂದನಾರ್ಹರು. ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಕಡೆಗಳಿಂದ ಅವರ ಹೋರಾಟಕ್ಕೆ ಬೆಂಬಲ ನೀಡಿ ದೆಹಲಿಗೆ ಹೋಗಿ ಮನೆ ಮನೆ ಪ್ರಚಾರ ಮಾಡಿ, ಗೆಲುವಲ್ಲಿ ದುಡಿದ ಕಾರ್ಯಕರ್ತರಿದ್ದಾರೆ. ಅವರೆಲ್ಲರ ಈ ಗೆಲುವು " ಯಾವುದೇ ಬದಲಾವಣೆ ಸಾಧ್ಯವಿಲ್ಲ. " ಅಂದುಕೊಂಡು ಹತಾಶರಾಗಿದ್ದ ಹಲವು ಸಜ್ಜನರಿಗೆ ಕಾರ್ಗತ್ತಲ ರಾತ್ರಿಯ ಆಶಾಕಿರಣವಾಗಿ ಕಾಣುತ್ತಿದೆ.
ಇದುವರೆಗೆ ಆಮ್ ಆದ್ಮಿ ಗುಂಪು ಹೋರಾಟಗಾರರಾಗಿದ್ದರು. ಆದರೀಗ ಅವರು ರಾಜಕಾರಣಿಗಳು. ಈಗ ರಾಜಕಾರಣವನ್ನೇ ವಿರೋಧಿಸುವಂತಿಲ್ಲ. ಅದರಲ್ಲಿನ ಕೊಳಕನ್ನು ಮಾತ್ರ ವಿರೋಧಿಸಬಹುದು. ಕೇಂದ್ರದಲ್ಲಿ ಏಕ ಪಕ್ಷದ ಆಡಳಿತದ ಯುಗ ಅಂತ್ಯವಾಗಿ ಸಮ್ಮಿಶ್ರ ಸರ್ಕಾರದ ಪರ್ವ ಆರಂಭವಾಗಿ ಹಲವು ಕಾಲ ಕಳೆದಿದೆ. ಅದರ ಸಾಧಕ ಬಾಧಕಗಳನ್ನು ದೇಶ ಅನುಭವಿಸಿದೆ. ಅದನ್ನು ಹಲವು ಪ್ರಾದೇಶಿಕ ಪಕ್ಷಗಳು ದುರುಪಯೋಗಪಡಿಸಿಕೊಂಡವು ಎಂಬುದು ಬೇರೆ ಮಾತು. ಹಾಗೆಯೇ ಮುಖ್ಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲು ಕೆಲವು ಅಸಂವಿಧಾನಿಕ ಹಾದಿ ಹಿಡಿದದ್ದೂ ಉಂಟು. ಆದರೆ ಸಮ್ಮಿಶ್ರ ರಾಜಕಾರಣ ಈಗ ವಾಸ್ತವದ ರಾಜಕಾರಣ. ಹಾಗೆಯೇ ದೆಹಲಿಯಲ್ಲಿ ಆಮ್ ಆದ್ಮಿ ಬೇರೆ ಪಕ್ಷಗಳನ್ನು ಭ್ರಷ್ಟರು ಎಂದು ದೂರವಿಡಲು ನೋಡಿದರೂ ಜನ ಅವರನ್ನೂ ಆರಿಸಿದ್ದಾರೆ. ಹಾಗೆ ನೋಡಿದರೆ ಇವರಿಗಿಂತ ಹೆಚ್ಚೇ ಆರಿಸಿದ್ದಾರೆ. ಜನಾಭಿಪ್ರಾಯವನ್ನು ಗೌರವಿಸಲೇ ಬೇಕು.ಜನರು ಸಮ್ಮಿಶ್ರ ಸರ್ಕಾರಕ್ಕೆ ಆದೇಶಿಸಿದ್ದಾರೆಂದು ಅರ್ಥ ಮಾಡಿಕೊಳ್ಳಬೇಕೇ ಹೊರತು ಹಠ ಹಿಡಿದು ಮತ್ತೆ ಚುನಾವಣೆಗೆ ಒತ್ತಾಯಿಸುವುದಲ್ಲ.
ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳು ಸರ್ಕಾರ ರಚಿಸಲು ಯಾಕೆ ಯೋಚಿಸುತ್ತಿಲ್ಲ ಎಂದರೆ ಅವರಿಗೆ ನೈತಿಕತೆಯ ಭಯವಲ್ಲ. ಅವರಿಗೆ ಗೊತ್ತಿರುವ " ತಂತ್ರ" ಗಳನ್ನು ಉಪಯೊಗಿಸಿದರೆ ಆಗುವ ಪರಿಣಾಮದ ಭಯ. ಕರ್ನಾಟಕದಲ್ಲಿ ಅದರ ರುಚಿ ಆ ಪಕ್ಷಗಳಿಗಾಗಿದೆ. ಅಂಥದ್ದರಲ್ಲಿ ಯಾವುದೋ ಪಕ್ಷ ಆಮ್ ಆದ್ಮಿಗೆ ಸರ್ಕಾರ ರಚಿಸಲು ಸಹಕರಿಸುತ್ತೇನೆಂದರೆ ಅದರ ಸಾಧಕಗಳ ಬಗೆಗೆ ಯೋಚಿಸುವುದು ಒಳ್ಳೆಯದು-ಕಾರ್ಯಸಾಧುವಾದ ಷರತ್ತುಗಳೊಂದಿಗೆ.
ಯಾಕೆಂದರೆ ಆಮ್ ಆದ್ಮಿಗೆ ಅಧಿಕಾರದ ಆಸೆ ಇಲ್ಲದಿರುವುದರಿಂದ ಅವರನ್ನು ಬೆಂಬಲ ಹಿಂಪಡೆಯುವ ಬ್ಲಾಕ್ ಮೇಲ್ ಮಾಡಲಾಗುವುದಿಲ್ಲ. ಬೇಷರತ್ತಾಗಿ ಬೆಂಬಲ ನೀಡಿದರೆ ಯೋಚಿಸುವುದು ಒಳ್ಳೆಯದು. ಅದರಿಂದ ಮೊದಲನೆಯದಾಗಿ, ಅದು ಸರ್ಕಾರ ರಚಿಸಿ ಅದರ ಮೂಲಕ ವ್ಯವಸ್ಥೆಯ ಶುದ್ಧೀಕರಣದ ಕ್ರಿಯೆಯನ್ನು ಆರಂಭಿಸಲು ಅನುಕೂಲವಾಗುತ್ತದೆ. ಎರಡನೆಯದಾಗಿ ಆಮ್ ಆದ್ಮಿ ಪಕ್ಷಕ್ಕೆ ಈ ಸಲ ಇಷ್ಟು ಸೀಟು ಗೆಲ್ಲಲು ಸಾಧ್ಯವಾಗಿರುವುದಕ್ಕೆ ಬಹುಷಃ ಬೇರೆ ಪ್ರಬಲ ರಾಜಕೀಯ ಪಕ್ಷಗಳು ಆಮ್ ಆದ್ಮಿಯನ್ನು ಇವರೇನು ಮಾಡಿಯಾರು ಎಂದು ಹಗುರವಾಗಿ ಪರಿಗಣಿಸಿದ್ದೂ ಕಾರಣ. ಆದರೆ ಈಗ ಪಟ್ಟ ಭದ್ರ ಪಕ್ಷಗಳಿಗೆ ಆಮ್ ಆದ್ಮಿಯ ಭಯ ಶುರುವಾಗಿದೆ. ಇನ್ನೊಮ್ಮೆ ಚುನಾವಣೆಯಾದರೆ ಅವು ತಮ್ಮ ದೀರ್ಘಕಾಲಿನ ಹಿತರಕ್ಷಣೆಗಾಗಿ ಆಮ್ ಆದ್ಮಿಯನ್ನು ಬಲಿಹಾಕಲು ಎಂಥ ದಾರಿಯನ್ನೂ ಹಿಡಿಯಬಹುದು ; ಅವು ಪರಸ್ಪರ ಸಹಕರಿಸಲೂಬಹುದು. ಆಗ ದೇಶದ ಜನತೆಯ ಮನಸ್ಸಿನಲ್ಲಿ ಈಗ ತಾನೇ ಚಿಗುರುತ್ತಿರುವ ಕನಸು ಮುರುಟಿಹೋಗುವ ಸಾದ್ಯತೆಗಳಿರುತ್ತದೆ.

Wednesday, 24 July 2013
(ಅಮ್ಮ ಹೊರಟು ಹೋಗಿ ಎರಡು ತಿಂಗಳು...... [ ಜ್ಯೇಷ್ಠ ಶುದ್ಧ ಚತುರ್ದಶಿ. ಜೂನ್ 22] )
ಏಪ್ರಿಲ್ ನ ರವರವ ಬಿಸಿಲು ಅಮ್ಮನ ಬಲಗಾಲಿನ ಮೇಲೆ ಬೀಳುತ್ತಿತ್ತು. ಸಾಲದ್ದಕ್ಕೆ ನನ್ನ ಕೈಲಿದ್ದ ಮಡಕೆಯಲ್ಲಿನ ಬೆಂಕಿಯ ಶಾಖ ಬೇರೆ. ಕಾಲುಗಳನ್ನು ಮಡಚಿ ನೆರಳಿಗಿಡುವ ಅನಿಸುತ್ತಿತ್ತು. ಆದರೆ ದೇಹವನ್ನು ಚಟ್ಟಕ್ಕೆ ಹಗ್ಗದಿಂದ ಬಿಗಿಯಲಾಗಿತ್ತು. ಈ ಕಾಲುಗಳನ್ನು ನಾನು ಸಣ್ಣಲ್ಲಿಂದ ನೋಡಿಕೊಂಡು ಬಂದಿದ್ದೇನೆ. ಹಾಗೆಂದು ನಾನು ಆಗಾಗ್ಗೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಅಭ್ಯಾಸದವನಲ್ಲ. (ಒಂದು ವಾರದ ಮೊದಲು ಯುಗಾದಿಗೆ ಊರಿಗೆ ಹೋಗಿ ಹೊರಡುವ ಮೊದಲು ಅಮ್ಮನ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಲೂ ಸಾಧ್ಯವಾಗಿರಲಿಲ್ಲ. ನಾನು ಹೊರಡುವ ಸಮಯದಲ್ಲಿ ಅವಳು ಮಲಗಿದ್ದಳು. ಅವಳನ್ನು ಎಬ್ಬಿಸುವ ಮನಸ್ಸಾಗದೇ ಹಾಗೇ ಬಂದಿದ್ದೆ. ಕಡೆಗೂ ಅವಳು ನನಗೆ ಹೇಳದೇ ಹೋಗಿಬಿಟ್ಟಳು) ಅಥವಾ ಅಮ್ಮ ತನ್ನ ಕಾಲುಗಳಿಂದ ನನ್ನ ಒದ್ದೂ ಇಲ್ಲ. ನಾನು ಚಿಕ್ಕವನಿದ್ದಾಗ ಅಮ್ಮನ ಸೀರೆಯ ನೆರಿಗೆಯನ್ನು ಕಾಲ ಬುಡದಲ್ಲಿ ಕುಳಿತು ಸರಿಪಡಿಸಿದ ನೆನಪು; ಅಮ್ಮನ ಕಾಲುಂಗುರವನ್ನು ಹಾಕುವುದಕ್ಕೋ, ತೆಗೆಯುವುದಕ್ಕೋ, ಸರಿಪಡಿಸುವುದಕ್ಕೋ, ಅಥವಾ ಸುಮ್ಮನೆ ಹಾಗೇ ಕಾಲುಂಗುರವನ್ನು ಆಡಿಸಿದ ನೆನಪು ; ಅವಳಿಗೆ ಬೆನ್ನು ನೋವು ಅತಿಯಾದಾಗ ಅವಳ ಬೆನ್ನ ಮೇಲೆ ನನ್ನ ಕಾಲುಗಳಿಂದ ತುಳಿದ ನೆನಪು; ಕಾಲು ನೀಡಿ ಕೂತು ಹೂ ಕಟ್ಟುತ್ತಲೋ, ಓದುತ್ತಲೋ, ಬತ್ತಿ ಹೊಸೆಯುತ್ತಲೋ ಇದ್ದಾಗ ಆ ಕಾಲುಗಳನ್ನು ನೋಡಿದ ನೆನಪು. ನನ್ನನ್ನು ಊಟಕ್ಕೆ ಕೂರಿಸಿ ತಾನು ಬಡಿಸುತ್ತಾ, ನನ್ನ ಪಕ್ಕ ನಿಂತಾಗ ಆಕೆಯ ಕಾಲುಗಳನ್ನು ನೋಡಿದ ನೆನಪು; ತೀರಾ ಇತ್ತೀಚೆಗೆ ಕಳೆದ ವರ್ಷ ಯಡಿಯೂರಪ್ಪನವರ ರಾಜೀನಾಮೆ ಷೋ ನಡೆಯುತ್ತಿದ್ದಾಗ ತಿ. ನರಸೀಪುರದ ನಮ್ಮ ಮನೆಯ ಕುರ್ಚಿಯ ಮೇಲೆ ಕುಳಿತು, ಸೋಫಾದ ಮೇಲೆ ಕಾಲು ನೀಡಿ ಟಿ.ವಿ. ನೋಡುತ್ತಾ ( ಹಾಗೆ ಆರಾಮಾಗಿ ಕುಳಿತುಕೋ ಎಂದು ನಾನೇ ಆಕೆಗೆ ಹೇಳಿದ್ದೆ ; ಆದರೂ ನಾನು ಹೋದ ತಕ್ಷಣ ಆಕೆ ಕಾಲುಗಳನ್ನು ಕೆಳಗಿಳಿಸುತ್ತಿದ್ದಳು ) ಬತ್ತಿ ಹೊಸೆಯುತ್ತಾ " ಅಲ್ಲ ಯಡಿಯೂರಪ್ಪ ರಾಜೀನಾಮೆ ಕೊಡೋದೇ ಇಲ್ವಂತಲ್ಲ ಮಾರಾಯ " ಎಂತಲೋ ಇನ್ನೇನೋ ಹೇಳಿ ಆ ಕ್ಷಣದ ಸುದ್ದಿಯನ್ನು ಅಪ್ ಡೇಟ್ ಮಾಡಿದ ನೆನಪು.. ..
ನನ್ನ ಕಣ್ಣುಗಳಿಂದ ಬೀಳುತ್ತಿದ್ದ ಹನಿಗಳಿಗೂ ಅಮ್ಮನ ಪಾದದ ಬಿಸಿಯನ್ನು ಆರಿಸುವ ಭಾಗ್ಯವಿರಲಿಲ್ಲ.... ಏಕೆಂದರೆ ಅಮ್ಮನ ಆ ಕಾಲು ಆ ಕ್ಷಣ ನನ್ನ ಕಣ್ಣೀರ ಪರಿಧಿಯಿಂದ ಆಚೆ ತೀರದಲ್ಲಿತ್ತು............
(ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು ಇಲ್ಲಿ ಈಗ ಪ್ರಕಟಿಸುತ್ತಿದ್ದೇನೆ.)

ಅಮ್ಮ ಕಾಲವಾಗಿ ಇಂದಿಗೆ ಮೂರು ತಿಂಗಳು. ನೆನಪುಗಳು ಮಳೆಯ ಜೊತೆಗೇ ಸುರಿಯುತ್ತವೆ. ನಾವು
ಮನಸ್ಸು ಕೊಡಬೇಕಷ್ಟೆ. ...... ಅಮ್ಮ ಹೋದ ದಿನ ಅಲ್ಲಿ ಸೇರಿದವರು-ವಿಶೇಷವಾಗಿ ನಮ್ಮೂರ
ಜನ- ತೋರಿದ ಸಹಕಾರ ಮರೆಯುವಂಥದ್ದಲ್ಲ. ಹಳ್ಳದ ಈಚೆ ಕಡೆ ಬಿಳುವಿನಕೊಪ್ಪ ಮತ್ತು
ರಾಮಸ್ವಾಮಿ ಮನೆಯಿಂದ ಪ್ರಾರಂಭಿಸಿ ಆಚೆ ಕಡೆ ಪುರುಷೋತ್ತಮ, ಕಮ್ಮಕ್ಕಿ ರವಿ
ಮನೆಯವರವರೆಗೆ - ಜನ ತೊರಿದ ಸಹಕಾರ ಮರೆಯುವಂಥದ್ದಲ್ಲ. ನನ್ನ ಸ್ನೇಹಿತ ನಾರಾಯಣ್ "ನೀವು ಆ
ಸಂಬಂದವನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ " ಎಂದು ಹೇಳುತ್ತಿದ್ದರು.. ಅದು
ಅಮ್ಮಗಳಿಸಿದ ವಿಶ್ವಾಸವೇ? ನನ್ನ ತಮ್ಮಂದಿರು-ಉಮೇಶ, ರವಿ- ಸಂಪಾದಿಸಿದ್ದೇ ? ಅಥವಾ
ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಪೂರ್ವಾರ್ಜಿತ ಪುಣ್ಯವೇ? ಎಲ್ಲವೂ ಹೌದಿರಬಹುದು.
ಆದರೆ ನನ್ನ ಪ್ರಕಾರ ಅದಕ್ಕಿಂತ ಮುಖ್ಯವಾಗಿ ಅದು ನಮ್ಮೂರಿನ-ಹೊಕ್ಕಳಿಕೆಯ-ಗುಣ ವಿಶೇಷ.
ನಮ್ಮ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲವೆಂದಲ್ಲ. ಆದರೆ ಕಷ್ಟ-ಸುಖದಲ್ಲಿ ಅದನ್ನೆಲ್ಲ
ಲೆಕ್ಕ ಹಾಕುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ. ನಮ್ಮೂರಿನವರು ಪರಸ್ಪರ ತೋರಿಸುವ
ಆಸ್ಥೆಯೇ ಅಂಥದ್ದು. ಅಮ್ಮ ತೀರಿಕೊಂಡದ್ದು ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ.
ಅಂತ್ಯ ಕ್ರಿಯೆ ಶುರುವಾದದ್ದು ಮರುದಿನ ಬೆಳಿಗ್ಗೆ. ಸುಮಾರು ಇಪ್ಪತ್ತನಾಲ್ಕು ಗಂಟೆಗಳ
ಕಾಲ ನಮ್ಮ ಮನೆಯಲ್ಲಿ ನಮ್ಮ ಊರಿನ ಹಲವಾರು ಜನ ಇದ್ದೇ ಇರುತ್ತಿದ್ದರು- ಶಿಫ್ಟಿನ
ಮೇಲೇನೋ ಎಂಬಂತೆ. ಅದರಲ್ಲೂ ರಾತ್ರಿ ಅಮ್ಮನನ್ನು ಕಾಯುತ್ತಾ ಕೂರುವ ......... ಏನೆಂದು
ಹೇಳಲಿ ಅಂಥ ಕೆಲಸಕ್ಕೆ ನಮ್ಮೂರಿನ ಸುಮಾರು ಹತ್ತು ಹದಿನೈದು ಜನ ರಾತ್ರಿ ಇಡೀ ಕಣ್ಣು
ಮುಚ್ಚದೇ ಅದೂ ಇದೂ ಮಾತಾಡುತ್ತಾ ಕೂತೇ ಇದ್ದರು. ಅದರಲ್ಲೂ ಪುರುಷೋತ್ತಮ, ಪ್ರಭಾಕರ ನಂಥ
ಹಿರಿಯರು ಕೂತದ್ದು ನಾನು ಮರೆಯಲಾರೆ. ಜೊತೆಗೆ ಮಾಧವ ಮಾವ ರಾತ್ರಿ ಇಡೀ ಕಣ್ಣು ಮುಚ್ಚದೇ
ಕೂತಿದ್ದ..... ಬೆಳಗಾಯಿತು.....ಆಗಲೇ ಬೇಕು..... ಆದರೆ, ಎಂದಿನಂತೆ ನಾವು ಏಳುವ ಹೊತ್ತಿಗೆ ಮುಚೆಕಡೆ ಗುಡಿಸುತ್ತಲೋ, ಹೂ ಕುಯ್ಯುತ್ತಲೋ, ಮಕ್ಕಳಿಗೆ ಮುಖ ತೊಳೆಸುತ್ತಲೋ ಯಾವುದೋ ಬಾಗಿಲಲ್ಲಿ ಕಾಣುತ್ತಿದ್ದ ಅಮ್ಮನ ಮುಖ ಇನ್ನು ಕಾಣುವಂತಿರಲಿಲ್ಲ.... ಸಣ್ಣವನಿದ್ದಾಗ ಬೆಳಿಗ್ಗೆ ಅರೆ ನಿದ್ರೆಯಲ್ಲಿ, ಅಮ್ಮ ರೇಡಿಯೋದಲ್ಲಿ ಕೇಳಿಸುತ್ತಿದ್ದ ಭಕ್ತಿ ಗೀತೆಗಳೇ ಈಗಲೂ ನನ್ನ ಅತ್ಯಂತ ಅಚ್ಚುಮೆಚ್ಚು. ಅವುಗಳ ಸಂಗೀತದ ಕಾರಣಕ್ಕೋ, ಅಥವಾ ಸಾಹಿತ್ಯದ ಕಾರಣಕ್ಕೋ ಅಲ್ಲ. ಅವುಗಳನ್ನು ನಾನು ಕೇಳಿದ್ದ ಕಾಲದ ನೆನಪನ್ನು ಹೊತ್ತು ತರುವ ಕಾರಣಕ್ಕೆ...... ಪ್ರಭಾಕರ ಬಂದು " ಸ್ನಾನ ಮಾಡಿ" ಎಂದ. ಊರವರು ಒಬ್ಬೊಬ್ಬರಾಗಿ ಬರಲು ಪ್ರಾರಂಭಿಸಿದರು....... ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೆ ಜನ ಸೇರಿದಾಗ ನಮ್ಮ ತಪ್ಪುಗಳನ್ನು ಹುಡುಕಿ ಗದರುತ್ತಿದ್ದ ಅಮ್ಮ ಇರಲಿಲ್ಲ......
Subscribe to:
Posts (Atom)