Monday, 16 December 2013

ಅಮ್ಮ 'ಹೋಗಿ' ಎಂಟು ತಿಂಗಳು....

ಅಮ್ಮಾ
ಹೀಗೇಕೆ 'ಹೋದೆ' ಹೇಳದೇ ಕೇಳದೇ
ಹೋಗುವ ಹೊತ್ತೇ ಅಲ್ಲವಲ್ಲ !
ನೀನು ಮಾಡಬೇಕಾದ್ದು
ಮಾಡಿಸಬೇಕಾದ್ದು ; ನೋಡಬೇಕಾದ್ದು
ಬಹಳಷ್ಟು ಉಳಿದಿದೆ.
ನಿನ್ನ ಪ್ರತಿಕ್ರಿಯೆಗೆ ಕಾದಿದೆ
ಹೆದರುವ ಖುಷಿಯೇ ಇಲ್ಲ ನೀನಿಲ್ಲದೇ.

ನನಗೆ ಗೊತ್ತು
ನಿನಗೆ ಇಲ್ಲಿ ಎಲ್ಲ
ಸರಿ ಇದೆ ಎನಿಸುತ್ತಿರಲಿಲ್ಲ :
ಅವರು ಇವರ ಮನೆಗೆ ಹೋಗಲ್ಲ
ಇವರು ಅವರ ಮಾತಾಡಿಸಲ್ಲ
ಯಾರೋ ಯಾರನ್ನೋ ಕರೆದು ಕಳಿಸಲಿಲ್ಲ
ಆತ ಹೆಂಡತಿಯ ಮಾತು ಮೀರಲ್ಲ
ಈಕೆ ಗಂಡನ ಮಾತು ಕೇಳಲ್ಲ
ಇನ್ನಾರೋ ಅಪ್ಪ-ಅಮ್ಮನ್ನ ನೋಡಲ್ಲ.....
......... ಹೀಗೆ ನಿನಗೆ ಅನಿಸುತ್ತಿತ್ತಲ್ಲ......
ಅದೆಲ್ಲ ಹಾಗೇ ಇದೆಯಲ್ಲ !......
ಆದರೂ ನೀ ಹೀಗೆ 'ಬಾರದ ಊರಿಗೆ' ಹೋಗಬಾರದಿತ್ತು......

No comments:

Post a Comment