Tuesday, 31 December 2013

ಹೊಸದು ?

ನಾಳೆಯಿಂದ ಹೊಸ ವರುಷ
ನಾನದೇ ಹಳೆಯ ಮನುಷ್ಯ
ನಾಳೆಯ ಕ್ಯಾಲೆಂಡರ್‍ ಹೊಸದು
ಊಹ್ಞೂ, ನಾನಲ್ಲ ; ಬದಲಾಗುವುದಿಲ್ಲ.
ನನ್ನ ಆ ಹಳೆಯ ಚಾಳಿ ಕದಲದು
ಇದು ವರುಷದ ಕೊನೆಯ ದಿನ
ಇಲ್ಲ, ನನ್ನ ಅಟ್ಟಹಾಸಕ್ಕೆ ಕೊನೆ ಮೊದಲಿಲ್ಲ
ಕಾಲಕ್ಕೆ ಪ್ರತಿ ಕ್ಷಣ ಹೊಸದು
ನಾಳೆ ಬರೀ ಕ್ಯಾಲೆಂಡರ್‍ ಗೆ !

No comments:

Post a Comment