ಬರೆಯಬೇಕೆನಿಸಿದ್ದನ್ನೆಲ್ಲಾ ಬರೆಯುವ ಹಾಗಿಲ್ಲ
ವೆಬ್ ಮೇಲೆ ಸಿಬಲ್ ಕಣ್ಣು ಉಂಟಲ್ಲ
ಆದರೂ.. ಥೇನ್ ಛಳಿಗೆ ನಡುಗಿ
ಸ್ವೆಟರ್ ತೊಟ್ಟ ಹುಡುಗಿ ಸುಂದರವಾಗಿ ಕಂಡದ್ದು ಸುಳ್ಳಲ್ಲವಲ್ಲ !
ಅಣ್ಣಾ ಗುಂಪು ಸಾಮಾಜಿಕ ಹೋರಾಟಗಾರರು ಎಂದುಕೊಂಡು ರಾಜಕೀಯ ಮಾಡುವುದು ಯಾಕೆ?
ರಾಜಕಾರಣಿಗಳು ಬರೀ ರಾಜಕೀಯ ಮಾಡಿ ಸಾಮಾಜಿಕ ಕಾಳಜಿ ಮರೆಯುವುದು ಯಾಕೆ ?
ಮಡೆ ಸ್ನಾನ ಮಾಡಿದರೆ ಕೆಲವರ ಗಲಾಟೆ
ಎಣ್ಣೆ ಸ್ನಾನ ಮಾಡಿ ಮಾಡಿದವರದೇ ಗಲಾಟೆ
ಅಧಿಕಾರ ಸಿಗದಿದ್ದರೆ ಸಿಗಲಿಲ್ಲ ಎಂದು ಸಮಾವೇಶ
ಸಿಕ್ಕರೆ ಬಿಡಲ್ಲ ಎಂದು ಸಮಾವೇಶ
ರೆಡ್ಡಿಗೆ ಜಾಮೀನು ಸಿಕ್ಕಿಲ್ಲ ;
ಲೋಕಪಾಲ ಸದನದಲ್ಲಿ ಪಾಸಾಗಲಿಲ್ಲ.
ಸಂಕ್ರಾಂತಿಯ ನಂತರ ಯಡ್ಡಿ ಸುಮ್ಮನಿರಲ್ಲ
ರೇಣುಕಾಚಾರ್ಯ ಬಾಯಿ ಮುಚ್ಚಲ್ಲ.....
ಊರಲ್ಲಿ ತಮ್ಮನ ಗದ್ದೆ ಕೊಯ್ಲು ಆಗಿಲ್ಲ
"ಪಾರ್ಟಿ ಮಾಡೋಣ" ಎಂದಿದ್ದ ಗೆಳೆಯ ಬಂದಿಲ್ಲ
ಟಿಕ್...ಟಿಕ್.... ಹನ್ನೆರಡು ಹತ್ತಿರ ಬರುತ್ತಿದೆ..
ಖುಷಿಯೋ, ಬೇಜಾರೋ ಗೊತ್ತಾಗುತ್ತಿಲ್ಲ........
ತಲಪಬೇಕಾದ ಗೆಳೆಯರಿಗೆ ತಲುಪಿದೆ ಅನ್ನಿಸುತ್ತೆ !!!!!!!!!!!!!!!!
ReplyDeleteಸಾರ್ ನಾ ಊರಲ್ಲಿ ಇದ್ದಿದ್ರೇ... ಪಾರ್ಟಿ ಮಾದಕ್ಕ್ ಬಂದೇ ಬರ್ತಿದ್ದೆ.. ಬೇಜಾರ್ ಮಾಡ್ಕೊಬ್ಯಾಡಿ.... ಊರಿಗ್ ಬಂದಾಗ್ಲೇ.. ಪಾರ್ಟಿ ಮಾಡಣ.
ReplyDelete