ದೀಪಾವಳಿ : ಒಂದು ಕಾಲದಲ್ಲಿ ಜಗತ್ತೆಲ್ಲಾ ಕಗ್ಗತ್ತಲಲ್ಲೇ ಇತ್ತು. ದೀಪ ಹಚ್ಚುವುದೇ ಸಂಭ್ರಮ. ಇಂದು ನಗರಗಳು ರಾತ್ರಿಗೂ ಹಗಲಿಗೂ ವ್ಯತ್ಯಾಸ ಕಾಣದಷ್ಟು ಜಗಮಗಿಸುತ್ತಿವೆ. ಬೆಳಕು ಹಾಗು ಶಬ್ದ ಎರಡರ ಆರ್ಬಟವು ಜಾಸ್ತಿ. ಈಗಲೂ ದೀಪ ಹಚ್ಚಿ ಪಟಾಕಿ ಹೊಡೆಯುವುದೇ ಹಬ್ಬವೇ?
ಹಳೆಯ ಚಿತ್ರ ಗೀತೆಯೊಂದು ನೆನಪಾಗುತ್ತಿದೆ : " ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ ಸ್ಥಾಪಿಸಿದನು ವಿಜಯನಗರ ವಿದ್ಯಾರಣ್ಯ " ಅದು ಅಂದಿನ ಅಗತ್ಯ : ಕಾಡನ್ನು ಕಡಿದು ನಾಡನ್ನು ಕಟ್ಟುವುದು. ಆದರೆ ಇಂದು ಕಾಡನ್ನು ಬೆಳೆಸುವುದು ಮುಖ್ಯ. ಆದರೆ ನಾವು ಕಾಲದ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೆವೆಯೇ?
ಹಬ್ಬ: ದಿನ ನಿತ್ಯದ ಯಾಂತ್ರೀಕೃತ ಬದುಕಿಗೊಂದು ಬದಲಾವಣೆ. ಮತ್ತೆ ಮರು ಚೈತನ್ಯ ಪಡೆದು ದೈನಂದಿನ ಬದುಕಿಗೆ ಅಣಿಯಾಗುವುದು. ನಾನು ಯಾವಾಗಲು ವ್ಯವಹರಿಸುವ ಒಬ್ಬ ಗುಜರಾತಿ ಸೇಟು ಯಾರನ್ನೋ ರೇಗಿಸುತ್ತಿದ್ದ. " ನಾವು ಹಬ್ಬ ಅಂದರೆ ಉಪವಾಸ ಮಾಡುತ್ತೇವೆ. ನೀವು ಚೆನ್ನಾಗಿ ತಿಂದು ಮಲಗಿಬಿಡುತ್ತೀರ ? " ನಿತ್ಯ ಸುಖ ಭೋಜನ ಸವಿಯುವವನು ಉಪವಾಸ ಮಾಡುತ್ತಾನೆ. ನಿತ್ಯ ಅರೆ ಹೊಟ್ಟೆ ತಿಂದು ಹಗಲೆಲ್ಲಾ ಗೇಯುವವನು ಒಂದು ದಿನ ಹೊಟ್ಟೆ ತುಂಬಾ ಉಂಡು ಮೋಜು ಅನುಬವಿಸುತ್ತಾನೆ.
ದರ್ಮಗಳು, ಶಾಸ್ತ್ರಗಳು, ಆಚರಣೆಗಳು, ಯಾವಾಗಲೂ ಕಾಲದ ಅಗತ್ಯಕ್ಕೆ ತಕ್ಕಂತೆಯೇ ಇರಬೇಕು, ಇರುತ್ತಿದ್ದವು. ಇಲ್ಲದಿದ್ದರೆ ಅವು ಕಂದಾಚಾರ ಎನಿಸಿಕೊಳ್ಳುತ್ತವೆ. ಇತ್ತೀಚೆಗೊಮ್ಮೆ ಜಗತ್ತು ಆರ್ಥಿಕ ಕುಸಿತಕ್ಕೆ ಒಳಗಾಯಿತು. ನಾಳಿನ ಯೋಚನೆ ಮಾಡದೇ ಅತಿಯಾಗಿ ಅನುಭವಿಸುವ ಮನುಷ್ಯನ ಚಾಳಿಯೆ ಅದಕ್ಕೆ ಕಾರಣ. ಅದಕ್ಕೆ ಪರಿಹಾರ ಕಂಡು ಹಿಡಿಯಲು ಅರ್ಥ ಶಾಸ್ತ್ರಜ್ಞರು, ವಿಶ್ಲೇಷಕರು ಒದ್ದಾಡಿದರು. ಎಲ್ಲಾ ಗ್ರಾಹಕ ವಸ್ತುಗಳ ಮಾರಾಟ ಕಡಿಮೆಯಾಯಿತು. ಕಾರುಗಳು ಷೆದ್ದುಗಳಲ್ಲಿ ಉಳಿದವು. ಮಾರಾಟ ಕಡಿಮೆಯಾಯಿತು. ಜನ ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಲು ಆರಂಬಿಸಿದರು. ಇದು ಒಂದು ತರಹದಲ್ಲಿ ಒಳ್ಳೆಯದೇ ಅಲ್ಲವೇ? ಅಷ್ಟು ಮಟ್ಟಿಗೆ ಪೆಟ್ರೋಲಿಯಂ ಉತ್ಪನ್ನಗಳ ಕಡಿಮೆಯಾಯಿತು. ಮಾಲಿನ್ಯ ಕಡಿಮೆಯಾಯಿತು ಅಲ್ಲವೇ? ಇಲ್ಲ. ಮಾರುಕಟ್ಟೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಪ್ಯಾಕೇಜುಗಳನ್ನು ಘೋಷಿಸಲಾಯಿತು. ಜನ ಹೆಚ್ಚು ಹೆಚ್ಚು ವ್ಯಾಪಾರ ಮಾಡಬೇಕು. ಹೆಚ್ಚು ತಿನ್ನಬೇಕು. ಹೆಚ್ಚು ಕುಡಿಯಬೇಕು. ಹೆಚ್ಚು ಓಡಾಡಬೇಕು. ಇದು ಕಾಲದ ಅಗತ್ಯವೇ?
ಬಸ್ಮಾಸುರ ತನ್ನ ಸುಡುವ ಕೈಗಳನ್ನು ಎತ್ತಿ ನಮ್ಮತ್ತ ಬರುತ್ತಿದ್ದರೆ ನಾವು ಅವನನ್ನು ನಿಗ್ರಹಿಸುವ ಬದಲು ಅವನದೇ ತರದ ಕೈಗಳನ್ನು ಹೊಂದಲು ಹಾತೊರೆಯುತ್ತಿದ್ದೇವೆ. ಪ್ರಾಕೃತಿಕ ಸಂಪನ್ಮೂಲಗಳು ಇನ್ನೇನು ಕೆಲವೇ ವರ್ಷಗಳಲ್ಲಿ ಕಾಲಿಯಗುತ್ತವೆ ಎಂಬ ಎಚ್ಚರಿಕೆ ಇದೆ. ಆದರು ನಮಗೆ ಎಚ್ಚರವಿಲ್ಲ. ..
ಕತ್ತಲ ರಾತ್ರಿಗಳಲ್ಲಿ ಅಂದು ಪಂಜಿನ ಮೆರವಣಿಗೆ ಮಾಡಿ ಸಾಂಕೇತಿಕವಾಗಿ ಪ್ರತಿಬಟನಾ ಮೆರವಣಿಗೆಗಳು ನಡೆಯುತ್ತಿದ್ದವು. ಕತ್ತಲಲ್ಲಿ ನೂರಾರು ಪಂಜುಗಳು, ಘೋಷಣೆಗಳು ಜನರಿಗೆ ಸಂದೇಶ ನಿಡುತ್ತಿದ್ದವು. ಇಂದು ಜಗಮಗಿಸುವ ನಗರಗಳಲ್ಲಿ ಅದೇ ಪುನರಾವರ್ತನೆ. ನಾವು ಕ್ರಿಯೆಗಳ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೆವೆಯೇ?
ಇರಲಿ. ಹಬ್ಬಗಳನ್ನು ಸಾಂಕೇತಿಕವಾಗಿ ಆಚರಿಸೋಣ. ಕಡಿಮೆ ದೀಪ ಹಚ್ಚೋಣ. ಕಡಿಮೆ ಪಟಾಕಿ ಹೊಡೆಯೋಣ. ಎಲ್ಲರಿಗೂ ಶುಭವಾಗಲಿ...........

No comments:
Post a Comment