ಮುಂದಿನ ವಾರ ಕರ್ನಾಟಕದಲ್ಲಿ ಲೋಕ ಸಭೆಗೆ ಚುನಾವಣೆ. ನಾವು ಅಂದರೆ ಮತದಾರರು ಪ್ರತಿಯೊಬ್ಬರೂ ತಪ್ಪದೇ ಮತಚಲಾಯಿಸಬೇಕು. ಅದು ನಮ್ಮ ಹಕ್ಕು. ಮತಚಲಾಯಿಸಲು ಯಾವುದೇ ಕಾರಣಕ್ಕೂ ತಪ್ಪಬಾರದು. ಸರಿಯಾದ ಅರ್ಹ ಅಭ್ಯರ್ಥಿಗೆ ಮತ ಹಾಕಬೇಕು. ಮತ ಚಲಾಯಿಸುವಾಗ ಜಾತಿ, ಧರ್ಮ, ಹಣ, ಹೆಂಡ ಮುಂತಾದ ಆಮಿಷಗಳಿಗೆ ಬಲಿ ಬೀಳಬಾರದು. ಯಾಕೆಂದರೆ ಪ್ರಜಾಪ್ರಭುತ್ವ ಬಲಪಡಿಸಬೇಕು.
ಇದು ಎಲ್ಲಾ ರಾಜಕೀಯ ಮುಖಂಡರು, ಪಕ್ಷಗಳು ನಮಗೆ ನೀಡುವ ಪುಕ್ಕಟೆ ಸಲಹೆ.
ಮತ ಕೊಟ್ಟು ಅವರಲ್ಲಿ ಒಬ್ಬರನ್ನು ಚುನಾಯಿಸಿದ ಮೇಲೆ ನಮ್ಮ ಜವಾಬ್ದಾರಿ ಮುಗಿಯಿತು. ಆಮೇಲೆ ಅವರು ಆಡುವ ಆಟಗಳನ್ನು ನಾವು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕು.
ಅದೇ ರಾಜಕೀಯ ಪಕ್ಷಗಳು ನಾವು ಸರಿಯಾದ ಅಭ್ಯರ್ಥಿಯನ್ನೆ ಚುನಾವಣೆಗೆ ನಿಲ್ಲಿಸುತ್ತೇವೆ. ಯಾವುದೇ ಆಮಿಷಗಳನ್ನು ಒಡ್ಡುವುದಿಲ್ಲ. ಜಾತಿಯನ್ನು ನೋಡಿ ಮತ ಹಾಕಿ ಎಂದು ಹೇಳುವುದಿಲ್ಲ. ಗೆದ್ದ ಮೇಲೆ ಪಕ್ಷಾಂತರ ಮಾಡುವುದಿಲ್ಲ. ಪಕ್ಷಾಂತರಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ನಮಗೆ ಖಾತ್ರಿ ಕೊಡುವುದಿಲ್ಲ. ಏಕೆಂದರೆ ಅದನ್ನೆಲ್ಲಾ ಅವುಗಳು ಮಾಡಲಾಗುವುದಿಲ್ಲ.
ಇದು ಪ್ರಜಾ ಪ್ರಭುತ್ವ. ನಾವು ಪ್ರಭುಗಳು. ಇದನ್ನು ನಾವು ನಂಬಬೇಕು.